top of page

ಸರ್ಕಾರಿ ಹುದ್ದೆ ... ಬೇಡಿಕೆ ಹೋರಾಟ ಮತ್ತಷ್ಟು...

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Jun 1
  • 1 min read

ಸರ್ಕಾರಿ ಹುದ್ದೆ ...

ಬೇಡಿಕೆ ಹೋರಾಟ ಮತ್ತಷ್ಟು...


ನೌಕರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಸರ್ಕಾರಿ ನೌಕರಿ ಎಂದರೆ ಎಲ್ಲರಿಗೂ ಕೂಡ ಬಹಳ ಇಷ್ಟವೇ. ಓದಿದ ಎಷ್ಟೋ ಜನ ವಿದ್ಯಾವಂತರು ಈ ಸರ್ಕಾರಿ ನೌಕರಿಯ ಅಮಲಿನಲ್ಲಿ ತಮ್ಮ ಯೌವ್ವನವನ್ನೇ ಕಳೆದುಬಿಡುವುದು ಕಂಡುಬರುತ್ತದೆ. ಅದೆಷ್ಟೋ ಜನರಿಗೆ ಅದೊಂದು ಗಗನ ಕುಸುಮ. ಅದೊಂದು ಕನಸು ಒಂದು ಮಹತ್ವಕಾಂಶ ಜೀವಂತ ಧ್ಯೇಯವೇ ಆಗಿರುತ್ತದೆ. ಸರ್ಕಾರಿ ಕೆಲಸ ಒಂದನ್ನು ಗೆಟ್ಟಿಸಿ ಎಲ್ಲರಿಂದಲೂ ಕೂಡ ಶಭಾಷ್ಗಿರಿಯನ್ನು ಗೌರವನ್ನು ಸಂಪಾದಿಸುವ ಒಂದು ಇರದೆ ಬಹಳಷ್ಟು ಬಡ ಮಧ್ಯಮ ಜನರಿಗೆ ಇರುವುದು ಆಶ್ಚರ್ಯವೇನಲ್ಲ. ಹಾಗಾಗಿ ಎಷ್ಟೋ ವರ್ಷಗಟ್ಟಲೆ ಒಂದು ಕಡೆ ಪಟ್ಟಾಗಿ ಕೂತು ಕೋಚಿಂಗ್ ಹೋಗಿ, ಮಹಾನಗರಗಳಲ್ಲಿ ರೂಮು ಮಾಡಿಕೊಂಡು ಹೋಗುವರ ಸಂಖ್ಯೆ ಲಕ್ಷಗಟ್ಟಲೆ ಇದೆ.


ಆದರೆ ಸರ್ಕಾರ ನೌಕರಿ ಸಿಗುವುದು ಅಷ್ಟು ಸುಲಭವಲ್ಲ. ಓದಿದಷ್ಟು ಸುಲಭವಾಗಿ ಪರೀಕ್ಷೆಯಲ್ಲಿ ಸಿಕ್ಕಿ ಸಹಕಾರ ನೌಕರಿ ಗಿಟ್ಟಿರುವುದಿಲ್ಲಾ. ಇನ್ನು ಒಂದು ದೃಷ್ಟಿಕೋನದಲ್ಲಿ ನೋಡಿದರೆ ಯಾವುದೇ ಸರ್ಕಾರವಿರಲಿ ನೇಮಕಾತಿ ಎಂಬ ವಿಷಯ ಬಂದಾಗ ಆರ್ಥಿಕ ಸಮಸ್ಯೆ ಇತ್ಯಾದಿಗಳ ನೆಪ ಹೇಳಿ ನೇಮಕಾತಿಯನ್ನೇ ಮಾಡುವುದಿಲ್ಲ. ಲಕ್ಷ ಲಕ್ಷ ಹುದ್ದೆಗಳು ಖಾಲಿ ಬಿದ್ದಿರುತ್ತವೆ, ಸರ್ಕಾರಿ ಯಂತ್ರ ತುಕ್ಕು ಹಿಡಿದಿದ್ದರು ಕೂಡ ಅದಕ್ಕೆ ಸರ್ಕಾರಿ ಸೇವೆ ಮಾಡುವಂತಹ ಯೋಗ್ಯರನ್ನು ಪಡೆಯುವ ಮನಸ್ಸು ಸರ್ಕಾರಕ್ಕಿರುವುದಿಲ್ಲ.


ಒಂದು ಕಡೆ ಖಾಲಿ ಹುದ್ದೆಗಳು ಇನ್ನೊಂದು ಕಡೆ ನಿರುದ್ಯೋಗಿಗಳು ಇವೆರಡರ ಮಧ್ಯೆ ಜಡ ಸರ್ಕಾರ ಅಥವಾ ಆಸಕ್ತಿ ತೋಟದ ಸರ್ಕಾರ ನಮ್ಮೆದುರು ಕಂಡುಬರುತ್ತದೆ.ನಮ್ಮ ರಾಜ್ಯದಲ್ಲಂತೂ ನಿರಂತರವಾಗಿ ಅಥವಾ ನಿಯತಕಾಲಿಕವಾಗಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದಿಲ್ಲ. ಯಾವಾಗಲೂ ಒಂದು ಐದು ವರ್ಷಕ್ಕೂ 8 ವರ್ಷಕ್ಕೂ 10 ವರ್ಷಕ್ಕೂ ಹುದ್ದೆಗಳನ್ನು ಕರೆಯುತ್ತಾರೆ ಆಗ ಲಕ್ಷಪಲಕ್ಷತನ ಅರ್ಜಿ ಹಾಕುತ್ತಾರೆ ಅದು ಕೇವಲ 100 ಹುದ್ದೆಗಳಿಗೆ ಮಾತ್ರ. ನೂರು ಜನರಿಗೆ ಮಾತ್ರ ನೌಕರಿಗಿಟ್ಟುತ್ತದೆ ಅದು ಮೀಸಲಾತಿ ಒಳ ಮೀಸಲಾತಿ ಮುಂತಾದ ಮಾನದಂಡಗಳನ್ನು ಅನುಸರಿಸಿದ ಬಳಿಕ ನೂರು ಜನರಿಗೆ ನೌಕರಿ ದೊರೆತರೆ, ಉಳಿದ 99 ಸಾವಿರ ಮಂದಿ ಮತ್ತೆ ನಿರುದ್ಯೋಗಿಗಳಾಗಿ ಉಳಿಯುತ್ತಾರೆ.

ಹೀಗೆ ಇದೊಂದು ಲಾಟರಿ ತರಹ ಬರುತ್ತದೆ ಅದರ ಮಧ್ಯೆ ಸರ್ಕಾರಿ ಸಮೇತ ನೌಕರಿಗೆ ಇರುವ ಬೇಡಿಕೆ ಅದನ್ನು ಪೂರೈಸುವ ಬಗೆ ಬೇರೆ ರೀತಿದ್ದು ಕೆಲವು ಜನ ಅದೇ ದಂಧೆಯಲ್ಲಿ ಅದಕ್ಕೆ ಲಂಚ ಕೇಳುವ ನೌಕರಿ ಕೊಡಿಸುವ ಆಮಿಷವನ್ನು ತೋರಿಸಿ ಮಧ್ಯವರ್ತಿಗಳೇ ದುಡ್ಡು ಮಾಡಿಕೊಳ್ಳುವುದು ಉಂಟು.


ಎಲ್ಲದರ ಮಧ್ಯೆ ಅನಿಸುವುದು ಒಂದೇ ಇದಕ್ಕೂ ನಮಗೆ ಸರ್ಕಾರ ನೌಕರಿ ಬೇಕಾ ಅಥವಾ ಯಾವುದೋ ಕೈಲಾದ ನೌಕರಿ ಮಾಡಿಕೊಂಡು ನಮ್ಮ ಶಿಕ್ಷಣದ ಹುದ್ದೆಗೆ ಅನುಸಾರವಾಗಿ ಜೀವನ ಮುಂದುವರಿಸುವ ಒಳ್ಳೆಯದು ಗೊತ್ತಿಲ್ಲ.ಆದರೆ ಯಾವುದೋ ಒಂದು ಸರ್ಕಾರಿ ಹುದ್ದೆಗೆ ನೇಮಕಾತಿಗೆ ಕಾಯುತ್ತ ಜೀವನವನ್ನು ಕಳೆದುಬಿಡುವುದು ಮಾತ್ರ ಮೂರ್ಖತನವೇ ಹೌದು.

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ ಮದ್ಯ ಜಗಳಭರಿತ ಸಂಭಾಷಣೆಯನ್ನು ಕೇಳುತ್ತಾನೆ. ತವರಿಗೆ ಹೋದ ಹೆಂಡತಿ ಗಂಡನ ಮನೆಗ

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page