ಸೆಲೆಬ್ರಿಟಿಸ್ & Us ....
- ಮಹೇಂದ್ರ ಸಂಕಿಮನೆ
- Jun 11
- 2 min read
ಇನ್ ದಿ ವರ್ಲ್ಡ್ ಆಫ್ ಸೆಲೆಬ್ರಿಟಿಸ್...

ಈಚಿನ ಜಗತ್ತು ಸಾಮಾನ್ಯರ ಪ್ರಪಂಚವಾಗುವುದರ ಬದಲು ಸೆಲೆಬ್ರಿಟಿಗಳ ಸೊತ್ತಾಗುತ್ತಿದೆ.
ಇಂದು ಸಾಮಾನ್ಯತೆಗೆ ಸಾದಾತನಕ್ಕೆ ಬೆಲೆಯೇ ಇಲ್ಲ ಏನೇ ಆದರೂ ಸೆಲೆಬ್ರಿಟಿಗಳಾಗಬೇಕು ಎಂದು ಪ್ರತಿ ಸಾಮಾನ್ಯ ಜನ ಕೂಡ ಬಯಸುತೊಡಗಿದ್ದಾನೆ. ಕೇವಲ ಹೀರೋಗಳು ಸ್ಟಾರ್ ಗಳು ಸೆಲೆಬ್ರಿಟಿಗಳು ಮತ್ತು ಅದೇ ತರ ಸ್ಟೇಟಸ್ ಉಳ್ಳವರನ್ನು ಅಷ್ಟೇ ಎಲ್ಲಾ ಕಡೆ ಪರಿಗಣಿಸುತ್ತಿದ್ದೇವೆ. ಅದೇ ಇಂದಿನ ದಿನಮಾನದ ಮಾದರಿ ಕೂಡ ಆಗಿದೆ. ಯಾವುದೇ ಉತ್ಸವ ವಾಗಲಿ ಯಾವುದೇ ಕಾರ್ಯವಾಗಲಿ ಸಂಬಂಧ ಇರಲಿ ಬಿಡಲಿ ಒಬ್ಬ ಸೆಲೆಬ್ರಿಟಿಯನ್ನು ಕರೆಸುವುದು ವಾಡಿಕೆಯಾಗಿ ಹೋಗಿದೆ. ಜನರು ಕೂಡ ಸೆಲೆಬ್ರಿಟಿಗಳನ್ನು ನೋಡಲು ಅವರ ಜೊತೆ ಚಿತ್ರ ತೆಗೆಯಲು ಅದೆಷ್ಟು ಕಾತರಿಸುತ್ತಾರೆಂದರೆ ತಮ್ಮ ಪ್ರಾಣವನ್ನೇ ಒತ್ತೆ ಇಡುವಷ್ಟು ತಮ್ಮ ತಂದೆ ತಾಯಿಗಳಿಗೂ ಕುಟುಂಬಕ್ಕೂ ಕೊಡದ ಪ್ರಾಮುಖ್ಯತೆಯನ್ನು ಪ್ರಚಾರಪ್ರಿಯ ತಾರಾಗಣಕ್ಕೆ ಕೊಡ ಮಾಡುತ್ತಿರುವುದು ಯೋಚನೆಯ ವಿಚಾರ.

ಸೆಲೆಬ್ರಿಟಿಗಳನ್ನು ಮೆರೆಸಬಾರದು ಕುಣಿಸಬಾರದು ಎಂದು ಹೇಳುತ್ತಿಲ್ಲ. ಆದರೆ ಅವರ ಸ್ಥಾನ ಅವರಿಗಿರಲಿ. ಅದು ಮಾದರಿಯಾಗಬೇಕೆಂದರೆ ಅದು ಬಹುಶಃ ಕಷ್ಟ ಸಾಧ್ಯ. ಐಡೆಂಟಿಟಿ ಕ್ರೇಸಿಸ್ನಲ್ಲಿ ತಾನು ಗುರುತಿಸಿಕೊಳ್ಳಬೇಕು, ಪ್ರಚಾರದಲ್ಲಿ ಇರಬೇಕು ಎನ್ನುವ ಹುಕಿಯಲ್ಲಿ ಸೆಲೆಬ್ರಿಟಿಗಳೊಂದಿಗೆ ತಮ್ಮನ್ನು ಜೋಡಿಸಿಕೊಳ್ಳುವುದು ಜನತೆಯ ಹುಚ್ಚಾಗಿದೆ. ಜಾಗತಿಕವಾಗಿ ಜನಸಂಖ್ಯೆ ಎಂಟು ಬಿಲಿಯನ್ ಹತ್ತಿರ ಇದೆ ಅಂತದರಲ್ಲಿ ಈ ತರದ ಸಂಗತಿ ಜನರೊಂದಿಗೆ ಕೋಟ್ಯಂತರ ಜನರೊಂದಿಗೆ ವಿಭಿನ್ನವಾಗಿ ನಿಲ್ಲುವ ನೀವೊಂದು ಮನೋಭಾವನೆ ವಿಶೇಷವೇನು ಅಲ್ಲಾ ಅನಿಸುತ್ತದೆ. ಆದರೆ ಸೆಲೆಬ್ರಿಟಿ ಮೆಂಟಾಲಿಟಿ ಎನ್ನುವುದು ಒಂದಷ್ಟು ಆತಂಕಕ್ಕೆ ದುಡುತ್ತದೆ.
ಜೀವನದಲ್ಲಿ ಎಲ್ಲರೂ ಸೆಲೆಬ್ರಿಟಿಗಳಾಗಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಸೆಲೆಬ್ರಿಟಿಗಳ ಅಲ್ಲದೆ ಇರುವವರನ್ನು ಅಗೌರವಿಸುವುದು, ನೆಗ್ಲೆಟ್ ಮಾಡುವುದು ಕೂಡ ಒಳ್ಳೆಯದಲ್ಲ. ಯಾಕೆಂದರೆ ಇಂದು ಒಂದು ಶಾಲೆಯ ಒಂದು ಕಾಲೇಜ್ ಕಾರ್ಯಕ್ರಮಕ್ಕೆ ಸ್ಟಾರ್ ಗಳು ಚಿತ್ರ ಸೆಲೆಬ್ರಿಟಿಗಳೇ ಬರಬೇಕು. ಇನ್ಯಾರ ವಿಜ್ಞಾನಿಗಳು ಬುದ್ಧಿಪ್ರದರನ್ನೂಕರೆದು ಮಾತನಾಡಿಸಿದರೆ ಬುದ್ಧಿವಾದ ಹೇಳಿದರೆ ನೀ ಜನಕ್ಕೆ ಪಥ್ಯ ವಾಗುವುದೇ ಇಲ್ಲ. ಸೆಲೆಬ್ರಿಟಿಗಳೆ ಬೇಕು. ಆದರೆ ಅವರ ಮಾದರಿತನ ಅಥವಾ ಆತರ ಆಗುವುದು ಎಷ್ಟು ಜನರಿಗೆ ಸಾಧ್ಯವಾಗುತ್ತದೆ. ವರ್ಷಾನುಗಟ್ಟಲೆ ಶಿಕ್ಷಕರು ಪಾಠ ಮಾಡುವುದಕ್ಕಿಂತ ಒಂದು ದಿನ ಬಂದ ಸೆಲೆಬ್ರಿಟಿ ತುಂಬಾ ದೊಡ್ಡವನಾಗಿ ನಿಂತುಬಿಡುತ್ತಾನೆ ವರ್ಷವಿಡಿ ಹೇಳಿದ ಪಾಠಗಳು ಸೆಲೆಬ್ರಿಟಿಯ ಒಂದು ಡೈಲಾಗ್ ನಿಂದ ಮುಚ್ಚಲ್ಪಡುತ್ತದೆ. ಸೆಲೆಬ್ರಿಟಿ ಹೇಳುವ ನಿಮ್ಮ ಶಿಕ್ಷಕರನ್ನು ಗೌರವಿಸಿ ಎನ್ನುವ ಮಾತು ಯಾರ ತಲೆಯಲ್ಲೂ ಉಳಿಯುವುದೇ ಇಲ್ಲ. ನಡುವೆ ತೆಗೆದುಕೊಂಡು ಸೆಲ್ಫಿ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತದೆ ಆನಂತರ ನಾವು ಮಾಯ ನೀವು ಮಾಯ.
ಈ ಸೆಲೆಬ್ರಿಟಿಗಳ ಅಂದರೆ ಮುಖ್ಯವಾಗಿ ಅವರು ಬರುವುದು ಚಿತ್ರರಂಗ ಮತ್ತು ಕ್ರಿಕೆಟ್ ಆದರೆ ಇನ್ನಿತರ ರಂಗಗಳಿಂದಲೂ ಕೂಡ ಜನರು ಜನಪ್ರಿಯರಾಗಬೇಕು ಅವರನ್ನು ಜನ ಬೆಳೆಸಬೇಕು. ಅದು ಕೂಡ ತುಂಬಾ ಮುಖ್ಯವಾಗುತ್ತದೆ. ಸೆಲೆಬ್ರಿಟಿಸಂ ಎನ್ನುವ ಒಂದು ಪಂಥವೇ ಯಾ ಕಲ್ಟ್ ಬೆಳೆದಿದೆ ಅಂತ ಅನಿಸುತ್ತದೆ.

ಹಾಗೆ ನೋಡಿದರೆ ಭಾರತದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಎಂಜಾಯ್ಮೆಂಟಿಗೆ ಸಂಭ್ರಮಕ್ಕೆ ಪ್ರತಿದಿನ ಕೂಡ ಇದೆ. ವೆಸ್ಟರ್ನ್ ಸಂಸ್ಕೃತಿ ಹಾಗೆ ವರ್ಷಕ್ಕೆ ಮೂರೇ ಹಬ್ಬ ಇಲ್ಲಿಲ್ಲ. ಇಲ್ಲಿ ದಿನಕ್ಕೆ ಹತ್ತು ಹಬ್ಬ ಆಚರಣೆ ಹೇಗೆ ಮಾಡುತ್ತೀರಾ ಯಾವ ಪ್ರಮಾಣದಲ್ಲಿ ಮಾಡುತ್ತಿರಾ ಎಲ್ಲವೂ ಕೂಡ ಅವರವರ ಬಗ್ಗೆ ಬಿಟ್ಟದ್ದು. ಅಂದಮೇಲೆ ಸಂಭ್ರಮವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿ ಇಲ್ಲ. ಇಂದು ಕಾರ್ಪೊರೇಟ್ ಕಲ್ಚರ್ ನ ಅಡಿಯಲ್ಲಿ ಕಾರ್ಪೊರೇಟ್ ಗುಲಾಮಿತನದ ಅಡಿಯಲಿ ಕೆಲಸ ಮಾಡಿ ತಲೆ ಕೆಟ್ಟ ಜನಕ್ಕೆ ಒಂದಷ್ಟು ರಿಲೀಫ್ ಕೊಡುವುದು ಈ ಒಂದು ಸೆಲಬ್ರಿಟಿ ಕಲ್ಚರ್ ಗಳು. ವಾರಾಂತ್ಯದ ಮನೋರಂಜನೆಗಳು. ಅದಕ್ಕಾಗಿ ಜನ ಮುಗಿ ಬೀಳುತ್ತಾರೆ ಹುಚ್ಚೆದ್ದು ಹೋಗುತ್ತಾರೆ. ಅವರವರ ಖಬರೇ ಅವರಿಗಿರುವುದಿಲ್ಲ.
ಮತ್ತು ಇವರೆಲ್ಲ ಚೆನ್ನಾಗಿ ಕಲಿತವರು ಬಲ್ಲವರು. ಯಾರೂ ಕೂಡ ಹೆಬ್ಬೆಟ್ಟುಗಳಲ್ಲ. ಈ ಕಾರಣಕ್ಕೆ ಸುಶಿಕ್ಷಿತರಾದಷ್ಟು, ಹೆಚ್ಚು ಕಲಿತಷ್ಟು ಜನರು ಸಭ್ಯರಾಗುತ್ತಾರೆ ಎನ್ನುವುದು ಯಾವುದೇ ಪುರಾವೆ ಹೊಂದಿಲ್ಲ. ಇಲ್ಲದಿದ್ದರೆ ಭಾರತದಲ್ಲಿ ಲಿಟರಸಿ ರೇಟ್ ಹೆಚ್ಚಾದಂಗೆ ಎಲ್ಲವೂ ಕೂಡ ವ್ಯವಸ್ಥಿತವಾಗುತ್ತಾ ಹೋಗಬೇಕಿತ್ತು. ಆದರೆ ಇಂದು ಆರ್ಥಿಕತೆಯನ್ನು ಬೆಳೆಯುತ್ತಿದೆ ಆದರೆ ಅಂತಸತ್ವದ ಸಾಂಸ್ಕೃತಿಕತೆ ನೈತಿಕತೆಗಳು ಅಧಪತನಾಗುತ್ತಿವೆ.

ಸರ್ಕಾರದ ನಡವಳಿಕೆ ಹಾಗೂ ಜನರ ಪ್ರತಿಕ್ರಿಯೆ ಈ ಎರಡು ಕೂಡ ಈ ಸಂಗತಿಗೆ ಪುಷ್ಟಿ ನೀಡುತ್ತಿದೆ.
ಜನರಿಗೆ ವೋಟ್ ಹಾಕಲು ಒಬ್ಬ ಸಮರ್ಥ ಕ್ಯಾಂಡಿಡೇಟ್ ಕೂಡ ದೊರೆಯುತ್ತಿಲ್ಲ ಎಂದರೆ ಕೋಟ್ಯಂತರ ಜನಗಳಿದ್ದು ದಂಡವಲ್ಲವೇ. ಎಲ್ಲ ಸಂಗತಿಗಳ ಮರೆತು ನಾವು ಬರಿ ಮನರಂಜನೆ ಕೊಡುವ ಸೆಲೆಬ್ರಿಟಿ ಸಂಸ್ಕೃತಿಗೆ ಎರವಾದರೆ ಈ ಬದುಕಿಗೆ ಅರ್ಥ ಇದೆಯಾ?
ಒಂದು ಆಲೋಚನೆ ಮಾಡಲೇಬೇಕಿದೆ . ಒಂದಷ್ಟು ವಿವೇಚನೆಗಳನ್ನು ಜನರು ಕೈಗೊಳ್ಳಬೇಕಿದೆ. ಯಾಕೆಂದರೆ ಸಮಾಜ ಅಥವಾ ನಾವುಗಳು ಒಟ್ಟಾರೆ ಬದಲಾಗುವುದು ನಮ್ಮ ಚಿಂತನೆ ಮತ್ತು ಅವುಗಳ ಕಾರ್ಯ ತತ್ಪರತೆಯಿಂದ.
_ ಮಹೇಂದ್ರ ಸಂಕಿಮನೆ
Comments