top of page
  • Writer's pictureಮಹೇಂದ್ರ ಸಂಕಿಮನೆ

ವಿವಿಯ ಹೂಬನದಲ್ಲಿ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಯಾರಿಗೆ ಗೊತ್ತಿಲ್ಲ ಹೇಳಿ..? ಆ ಬೃಹತ್ತಾದ ಬೂದು ಬಣ್ಣದ ಕಟ್ಟಡ ಅಲ್ಲೊಂದು ಗಡಿಯಾರ ತುದಿಗೆ ಪುಟವಿಟ್ಟಂತೆ ಗುಲಾಬಿ ಬಣ್ಣದ ಗುಮ್ಮಟ ಕಂಡಾಗ ಅಲುಮ್ನಿಗಳು( ಹಳೆ ವಿದ್ಯಾರ್ಥಿಗಳು) ಪುಳಕಿತರಾಗುತ್ತೇವೆ.


ಏನೇ ಅಂದರೂ ವಿಶ್ವವಿದ್ಯಾಲಯದಲ್ಲಿನ ನನ್ನ/ನಮ್ಮ ಪಾಲಿನ ಅನುಭವ ವಿಶಿಷ್ಟವೇ.


ಅದರಲ್ಲೂ ವಿವಿ ಎದುರಿಗಿನ ಉದ್ಯಾನವನವಂತೂ ತೀರ ಮನಮೋಹಕ.


ನಮಗೆ ಒಂದು ದಿನ ಮುಂಜಾನೆ ವೇಳೆ ವಿಶೇಷ ತರಗತಿ ಇಟ್ಟಿದ್ದರು. ಕ್ಲಾಸ್ ಬೀಗ ತರುವವ ಬರಲಿಲ್ಲವೋ, ತಡವಾಯಿತೋ ಕ್ಲಾಸ್ ಬಾಗಿಲು ತೆರೆಯದ ಕಾರಣ ಆ ಉದ್ಯಾನವನದ ನೆಲಹಾಸಿನ‌ಮೇಲೆ ಕೂತು, ಡಿಸಿ ಪಾವಟೆ ಕೈತೋರಿದ ಕಂಚಿನ ಪ್ರತಿಮೆ ಎದುರು, ಮುಂಜಾನೆ ಸೂರ್ಯ ರಶ್ಮಿಯಲ್ಲಿ ಬ್ಯಾಗುಗಳನ್ನು ಹರವಿಕೊಂಡು ಬಯಲು ಪಾಠ ಕೇಳಿದ ಅನುಭವ ಯಾವಾಗೂ ಮರೆಯುವುದಿಲ್ಲ.

ಅಂದಹಾಗೇ, ಅಂದು ಪಾಠ ಮಾಡಿದ ಡಾ| ಎಸ್.ಎಸ್. 'ಹೂಗಾರ್' ಅವರೂ ಅವಿಸ್ಮರಣೀಯ ವ್ಯಕ್ತಿ.


(ವಿವಿ ಕುರಿತು ಇನ್ನಿತರ ಸಂಗತಿ ಈಗ್ಹಾಲಿ ಬರೆಯಲಾರೆ)



ಬಣ್ಣ ಬಣ್ಣದ ತರಹೇವಾರಿ ಹೂಗಳಂತೂ ಜೇನಿಗೂ, ನೋಡುವ ಕಣ್ಣಿಗೂ ಹಬ್ಬ. ಅದಕ್ಕೆ ಇರಬಹುದು ಆ ಗಾರ್ಡನ್ನಿನ ಹೂಗಳ ಸಮೃದ್ಧ ಮಕರಂದ ಲಭ್ಯತೆಯ ಕಾರಣ, ಕಟ್ಟಡದ ಮೇಲೆ ಅಸಂಖ್ಯ ಬೃಹಜ್ಜೇನುಗಳಿರುವುದು.


ಈಗ ಹೇಳಹೊರಟಿರುವುದು ಉದ್ಯಾನದ ಕುರಿತು.

ಯಾರಿಗಾದರೂ ಈ ಸುಂದರ ಉದ್ಯಾನವನ ನೋಡಿದರೆ ಇಲ್ಲೇ ಇರಬೇಕೆನಿಸುತ್ತದೆ. ಜುಲೈ-ಅಕ್ಟೋಬರಿನ ಡೇರೆ ಹೂಗಳೆಲ್ಲ ಗುಂಪ್ಗುಂಪಾಗಿ ಡೇರೆ ಹಾಕಿರುತ್ತವೆ. ಕೆಂಪು, ಹಳದಿ , ಬಿಳಿ ಹೂಗಳ ಗುಲಾಬಿಗಳು ಈ ಸಂದರ್ಭದಲ್ಲಿ ಅರಳಿ ನಿಂತಾಗ ನೋಡಬೇಕು.



ಹೂವಿನ ಮಳ್ಳರನ್ನು ಹುಚ್ಚರಾಗಿಸುತ್ತದೆ. ಕವಿವಿಯಲ್ಲಿ ನನ್ನ ಎಮ್.ಕಾಂ. ಮುಗಿದಿತ್ತು. ಆಗ ಅಮ್ಮನಿಗೂ ಈ ಉದ್ಯಾನವನ ತೋರಿಸಬೇಕೆಂದು ಕರೆದುಕೊಂಡು ಹೋದೆ, ಅಲ್ಲಿನ ಹೂ ಗಿಡ ಕಂಡು‌ ಈ ಬುಡ ಬೇಕು...ಈ ಗಿಡ ಬೇಕೆಂದು ಹಠ ಬಿದ್ದು ಬಿಟ್ಟಿದ್ದಳು. ಅಲ್ಲಿನ ಕೆಲಸಗಾರರ ಬಳಿ ' ನಮಗೆ ವೊಂದು ಹೆಣೆ ಕಟ್ ಮಾಡ್ಕೊಡ್ರಿ" ಎಂದು ಕೇಳಿದ್ದಳು. ಪಾಪ ಮಾಲಿ, ಇಲ್ರಿ ಹಾಂಗ್ ಮಾಡಾಕ್ ಬರುದಿಲ್ಲ ಎಂದಾಗ, ಅವಳನ್ನು ಅಲ್ಲಿಂದ ಕರೆತರುವಷ್ಟರಲ್ಲಿ ಸಾಕಾಗಿಹೋಗಿತ್ತು. ಹೂವಿನ ಪ್ರೀತಿ ಇರುವವರಿಗೆ ಆ ಉದ್ಯಾನವನವಂತೂ ಹುಚ್ಚು ಹಿಡಿಸುತ್ತದೆ. ಬರಗುವ ಗುಲಾಬಿ ಮುಳ್ಳು, ಹೂವಿನ ಮಳ್ಳಿದ್ದವರಿಗೆ ಕಾಣುವುದಿಲ್ಲ, ಅವರಿಗೆ ಕಾಣುವುದು ಅದರ ರಂಗು ರಂಗಿನ ಸೌಂದರ್ಯ ಮಾತ್ರ.


ಆ ಗಾರ್ಡನ್ನಿಂದ ಹೂಗಿಡ ತರದಿದ್ದರೂ, ಧಾರವಾಡದ ಸವಿನೆನಪಗಾಗಿ ತಂದು ,ರಸ್ತೆಬದಿಯಲ್ಲಿ ಮಾರಲಿಟ್ಟ ಗುಲಾಬಿ, ದಾಸವಾಳ, ಗಿಡ ನೆಟ್ಟದ್ದು ಅಲ್ಲಿನ ನೆನಪುಗಳಿಗೆ ಬೇಸಿಗೆಯಲ್ಲಿ ನೀರೆರೆಸಿಕೊಳ್ಳುತ್ತವೆ. ಹಳೆ ಎಲೆ ಹಳದಿಯಾಗಿ ಉದುರಿದರೂ,

ಆಗಾಗ ಹೂಬಿಟ್ಟು ನಗುತ್ತವೆ.


#ಮಹೇಂದ್ರ_ಸಂಕಿಮನೆ

11 views0 comments

Recent Posts

See All

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ. ಇಂದು ದುಡ್ಡು ಎಲ್ಲರ ಬಳಿ

Post: Blog2_Post
bottom of page