"ಮೌನ ಬಂಗಾರ"
ಕಬ್ಬಿಣವೂ ಲೋಹ.
ಚಿನ್ನವೂ ಲೋಹ.
ಜನರು ಮೈಮೇಲೆ ಧರಿಸೋದು ಚಿನ್ನಾನೇ.
ಯಾಕೆ ಅನ್ನೋ ಮೊದಲು,
ಕಬ್ಬಿಣ ಮತ್ತೆ ಚಿನ್ನದ ಗುಣಧರ್ಮ ನೋಡ್ಬೇಕು ನೀವು.
ನೋಡಿ, ಕಬ್ಬಿಣ ತುಂಬಾ ಗಟ್ಟಿ ಲೋಹ. ಮನೆ ಕಟ್ಟಡ ಎಲ್ಲದಕ್ಕೂ ಬೇಕು.ಆದರೆ ಕಬ್ಬಿಣ ತನ್ನ ಸುತ್ತ ಇರೊಇ ಗಾಳಿ, ನೀರಿಗೆಬೇಗ ಪ್ರತಿಕ್ರಿಯೆ ಕೊಡುತ್ತೆ. ಹಾಗಾಗೆ ಕಪ್ಪಗಾಗುತ್ತೆ. ಹಾಗೇ ತುಕ್ಕು ಹಿಡಿಸ್ಕೊಂಡು, ಪದರು ಪದರಾಗಿ ಉದುರುತ್ತೆ. ತನ್ ಪಾಡಿಗೆ ತಾನಿದ್ರೆ ಕಬ್ಬಣ ಕಬ್ಬಿಣನೇ. ಎಲ್ಲದಕ್ಕೂ ಕೊಡೊ ಪ್ರತಿಕ್ರಿಯೆ ಅದರ ಹಾಳು ಮಾಡುತ್ತೆ.
ಅದರೆ ಬಂಗಾರ ಹಾಗಲ್ಲ. ತನ್ನ ಹೊರಗಿನ ವಾತಾವರಣ , ಸಾದಾ ಗಾಳಿ ನೀರು ಬಿಸಿಲು ಯಾವ ದಕ್ಕೂ ಪ್ರತಿಕ್ರಿಯಿಸೊಲ್ಲ. ಹಾಗಾಗಿ ಹೊಳಿತಾ ಇರುತ್ತೆ. ಬೇರೆ ಲೋಹದ ಜೊತೆ ಸ್ವಲ್ಪ ಬೆರೆತು ಆಭರಣ ಆಗುತ್ತದೆ. ಅದಕ್ಕೆ ಕಾರಣ ಎಲ್ಲಾದಿಕ್ಕೂ ಪ್ರತಿಕ್ರಿಯೆ ನೀಡದಿರೋ ಗುಣ. ಹಾಗಂತ ಚಿನ್ನ ಬಿಸಿ ಮಾಡದಾಗ, ಆಮ್ಲಗಳನ್ನ ಹಾಕ್ದಾಗ ಎಲ್ಲ ವರ್ತನೆ ತೋರ್ಸುತ್ತೆ.
ನಮ್ಮ ಲ್ಲೂ ಅಷ್ಟೇ. ನಾವು ಒಮ್ಮೊಮ್ಮೆ ಎಲ್ಲದಕ್ಕೂ ಪ್ರತಿಕ್ರಿಯೆ ಕೊಡೋಕೋಗಿ, ಉತ್ರ ಕೋಡೋಕೋಗಿ ಸುಸ್ತಾಗೋಗ್ತೀವಿ. ಯಾವಾಗ ಸ್ವಲ್ಪ ಸುಮ್ಮನಾಗ್ತೀವಿ ಆಗ ಅರ್ಥ ಆಗುತ್ತೆ. ಅದೇ ಮೌನ ಬಂಗಾರಾ...ಅಲ್ವರಾ?
#ಹೊಳಹು
-ಮಹೇಂದ್ರ ಸಂಕಿಮನೆ
Kommentare