ನಂಬರ್ ಮತ್ತು ನಂಬಿಕೆ
"ಅಮ್ಮಾ ನಾನು ಫರ್ಸ್ಟ್ ಬಂದೆ"
"ನಮ್ ಹುಡ್ಗಿ ಆಲ್ ಇಂಡಿಯಾ ಎರಡನೇ ರ್ಯಾಂಕು"
"ಆ ಎಕ್ಸಾಮಲ್ಲಿ ಟಾಪ್ ರ್ಯಾಂಕಲಿದಿಯಾ ಅಂದ್ರೆ ಗ್ರೇಟ್ ಬಿಡು."
ಹೀಗೆ ಮೊದ ಮೊದಲ ನಂಬರ್ಗಳೆಂದರೆ ಎಲ್ಲರಿಗೂ ಇಷ್ಟ. ಇನ್ನು ಜನರು ಕೆಲವು ನಂಬರ್ಗಳ್ನು ತುಂಬ ಭಾವುಕವಾಗಿ ಹಚ್ಚಿಕೊಳ್ತಾರೆ. ನಿಮ್ಮ ಬರ್ತ್ ಡೇಟ್ ಎಷ್ಟು? ಎಂದಾಗ ಏನೋ ಮೋಹ. ಅದೆಷ್ಟೋ ಜನರ ಈಮೇಲು, ಇನ್ಸ್ಟಾಗಳು ಅವರ ಜನ್ಮದಿನದ ಜೊತೆಗಂಟಿರುತ್ತದೆ.
ಇನ್ನು ಕ್ರೀಡೆಗೆ ಬಂದಾಗ ಅಂಗಿಯ ಬೆನ್ನಿಗೆ ಬರೆದ ಜೆರ್ಸಿ ನಂಬರ್ ಇಂದಲೇ ಆಟಗಾರನನ್ಬು ಗುರುತಿಸಲಾಗುತ್ತದೆ...ಕೆಲವು ನಂಬರ್ ಎಂದರೆ ಇವನು ಎಂಬ ಬ್ರ್ಯಾಂಡ್ ಆಗಿಹೋಗಿದೆ. ಆ ಆಟಗಾರರೂ ನಂಬರ್ ಅನ್ನು ನೆಚ್ಚಿರಬಹುದು, ಅದರೆಡೆ ಮೋಹವೂ ಇರಬಹುದು. ಕೆಲ ನಂಬರ್ ಗಳನ್ನು ಜನ ತಮಗೆ ಸಾರಾವಳಿ ಎಂದು ಭಾವಿಸುವರಿದ್ದಾರೆ.
ಇನ್ನು ಮುಖ್ಯವಾಗಿ ಜ್ಯೋತಿಷ ನಂಬುವವರು, ನ್ಯುಮರಾಲಜಿ ನಂಬುವವರು ಇಂಥ ನಂಬರ್ ಹೀಗೆ ಹೀಗೀಗಾಗುತ್ತೆ ಎಂದು ವಿಶ್ಲೇಷಣೆ ಮಾಡುತ್ತಾರೆ. ಇಂಥ ನಂಬರ್ ಕೆಟ್ಟದ್ದು ಎಂದು, ಇದು ಅದೃಷ್ಟದ ಸಂಖ್ಯೆ ಎಂದು ಬಿಂಬಿಸುತ್ತಾರೆ.
ಇನ್ನು ವ್ಯಾಪಾರದಲ್ಲೂ ಸಹ ಒಂದು ಎನ್ನುವ ಬದಲು ಲಾಭ ಎನ್ನುತ್ತಾರೆ. ಜೋಡಿಗೆ ಪ್ರಾಶಸ್ತ್ಯ.
ಬಹಳ ಕಡೆ ಮೂರು ವರ್ಜ್ಯ. ನಾಲ್ಕು ಜನರ ಕೇಳಿ ಕೆಲಸ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಐದು ಗುರುವಿನ ಸಂಖ್ಯೆ ಎಂಬ ನಂಬಿಕೆ. ಏಳು ಶನಿ ಅಂಕೆ ಎಂದರೆ, ಎಂಟಕ್ಕೆ ಗಂಟು ಎನ್ನುತ್ತಾರೆ, ಒಂಬತ್ತೆಂದರೆ ಶುಭ ಎಂಬ ವಾಡಿಕೆ.. ಹೀಗೆ ಒಂದಷ್ಟು ಜನಮಾನಸದಲ್ಲೆ ನೆಲೆಯಾದ ಜ್ಞಾನವಿದೆ.
ಕೆಲವರ ಪಾಲಿಗದು ನಡೆಯುತ್ತದೆ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.
ಇದರ ಹೊರತಾಗಿಯೂ ನಂಬರ್ ಕ್ರೇಝ್ ಇರುವುದು ಸತ್ಯ. ಕೆಲವು ವಾಹನಗಳ ನಂಬರ್ ಅನ್ನು ಕೋಟ್ಯಂತರ ರೂಪಾಯಿಗೆ ಹರಾಜು ಹಾಕುತ್ತಾರೆ. ಕೆಲವು ಮೊಬೈಲ್ ನಂಬರ್ಗಳನ್ಬು ಹಣ ಕೊಟ್ಟ ಬುಕ್ ಮಾಡುತ್ತಾರೆ. ಹೀಗೆಲ್ಲ ಇದೆ.
ಅಂಕಿಯ ಆಟಅಸಲಿಗೆ ಸತ್ಯವಾ? ಸಂಖ್ಯೆ ನಂಬಿಕೆ ಉಳಿಸುತ್ತಾ? ಜೀವನ ಬದಲಿಸುತ್ತಾ? ದುರಾದೃಷ್ಟ ತರುತ್ತಾ? ಗೆಲುವಿಗೆ ಕಾರಣವಾಗುವುದಾ ? ನೀವೂ ನಿಮ್ಮ ಅನುಭವ , ಅಭಿಪ್ರಾಯ ತಿಳಿಸಿ.
---- Mahendra Sankimane
Comments