ಸಣ್ಣ ಘಟನೆ ಸಣ್ಣ ಪಾಠ
"ನಂಗೊಂದು ಹೆಲ್ಪ್ ಮಾಡ್ತಿಯಾ ಮಿಸ್ಟರ್?"
ನನಗೆ ಏನಿರಬಹುದಯ ಅನ್ನೋ ಕುತುಹಲ, ಅನುಮಾನ.
ಅವರ ಲಕ್ಷ ಲಕ್ಷ ದುಡಿಯೋ ವ್ಯಕ್ತಿ. ನಾನು ಕಾಮನ್ ಮ್ಯಾನ್ ನನತ್ರ ಏನ್ ಕೇಳ್ಬಹುದು..ಅಂತ ಎಲ್ಲ ಯೋಚನೆ ಮಾಡೋ ಮೊದಲು ಹೂಂ ಹೇಳಿಬಿಟ್ಟಿದ್ದೆ.
"ನನಗೆ ಶಾಪ್ ಹೋಗೊಷ್ಟು ಟೈಮಿಲ್ಲ, ಸ್ವಲ್ಪ ಬೇರೆ ಕೆಲ್ಸ ಇದೆ, ಇಫ್ ಯೂ ಡೊಂಟ್ ಮೈಂಡ್ ನನಗಾಗಿ ಎರಡು ಪೆನ್ ತೊಗೊಂಡ್ ಬನ್ನಿ.
ಐ ವಿಲ್ ಪೇ ದ ಮನಿ "
ಇದ್ಯಾವ ಮಹಾ ವಿಷ್ಯ ಅಂತ ಓಕೆ, ಡನ್ ಅಂದೆ.
ಮರುದಿನ ಪೆನ್ ತೊಗೊಂಡು ಹೋಗಿ ಕೊಟ್ಟೆ. ಅವರು ಅಮೌಂಟ್ ಎಷ್ಟು? ಅಂತ ಕೇಳ್ದಾಗ,
" ನಲವತ್ತು ಸಾರ್ " ಅಂದೆ.
ಅವರು ನನ್ನ ಮುಖ ನೋಡುತ್ತ, ಪೆನ್ನು ನನ್ನತ್ತ ಸರಿಸಿ ಆರು ರೂಪಾಯಿಗೆ ಸಿಗುತ್ತೊ ಪೆನ್ನು, ಇದು ನನಗೆ ಬೇಡ, ಇದನ್ನ ಅಂಗಡಿಗೆ ವಾಪಾಸ್ ಮಾಡಪ್ಪ, ಇವತ್ ಸಂಜೆ ನನ್ಜೊತೆ ಬಾ ಪೆನ್ ಆರ್ ರೂಪಾಯಿ ಗೆ ಕೊಡಸ್ತೀನಿ ಅಂದ್ರು.
ಅರ್ಧಕ್ಕೆ ಅವರ ಪೆನ್ನು ಖಾಲಿ ಆಗಿ, ಜಸ್ಟ್ಎ ಮಿನುಟ್ ಮ್ಯಾಡಂ, ಇಫ್ ಯೋ ಡೊಂಟ್ ಮೈಂಡ್ ಎಂದು ಎರಡು ಮೂರು ಜನರ ಬಳಿ ಪೆನ್ ತೆಗೆದುಕೊಂಡು ಕೆಲಸ ಮುಗಿಸಿಯೇ ಬಿಟ್ಟರು.
ಇಷ್ಟು ಕೆಲಸಕ್ಕಾದರೆ , ನಾನು ಬಹುಶಃ ಅಂಗಡಿ ಸುತ್ತಿ ಬರಿತ್ತಿದ್ದೆನೋ ಏನೋ !!
ಆಮೇಲೆ ಅವರೇ ಅಂದರು, ಐ ಗಿವ್ ವ್ಯಾಲ್ಯು ಫಾರ್ ಮನಿ, ಐ ಡೋಂಟ್ ವೇಸ್ಟ. ಹಣ ಸುಮ್ನೆ ವೇಸ್ಟು ಮಾಡ್ಬಾರ್ದು ಅಂದ್ರು.
ಅವರ ಸಿದ್ದಾಂತ ದಲ್ಲಿ ತಪ್ಪಿರಲಿಲ್ಲ. ಅವರು ಹೇಳಿದ್ದೂ ತಪ್ಪಲ್ಲ. ಆದರೆ ನನ್ನ ವಿಚಾರ, ನನ್ನ ದಾರಿ ಬೇರೆಯದಾಗಿತ್ತು.ಅದು ಹಣ ಮತ್ತು ಹಣದ ಮೌಲ್ಯದ ನಡುವಿನ ವಿವೇಚನೆ ಆಗಿತ್ತು. ಹಣ ಇದ್ದ ಮಾತ್ರಕ್ಕೆ ಯಾರೂಸಹ ಯದ್ವಾತದ್ವಾ ಖರ್ಚು ಮಾಡಬಾರದೆನ್ನುವ ಮ್ಯಾನೆಜ್‌ಮೆಂಟ್ ಪಾಠವನ್ನು ಅವರು ನಯಾ ಪೈಸೆ ಕೇಳದೆ ಹೇಳಿಬಿಟ್ಟಿದ್ದರು.
ಇಷ್ಟಾಗಿಯೂ ಅವರೇ ಹೇಳೋ ಹಾಗೇ, ಹೆಲ್ಪ್ ಮಾಡ್ಬೇಕಪ್ಪ..ಆದ್ರೆ ನೊಡ್ಕೊಂಡ್ ಮಾಡಬೇಕು, ರಾಜಾ ತರ ಹೆಲ್ಪ್ ಮಾಡೊ ಮೊದ್ಲು ಥಿಂಕ್ ಮಾಡ್ಬೇಕು..ಅರ್ಥ ಆಯ್ತಾ ಅಂತ.
ಹೌದು ಜೀವನದ ಪಾಠ ಯಾರೇ ಹೇಳಲಿ. ಅದು ನಮಗೇ. ಆ ಪಾಠ ಮಿಸ್ ಮಾಡ್ಬಾರ್ದು.
Comments