#ಕಾರ್ಪೋರೇಟ್_ಕಥೆ
ಮಹೀಂದ್ರ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳು ಕೇಳಿದರೂ ಸುಲಭವಾಗಿ ಗುರುತಿಸಬಹುದಾದ ಜನಪ್ರಿಯತೆ ಆಟೋಮೊಬೈಲ್ ದಿಗ್ಗಜ ಮಹಿಂದ್ರಾ ಕಂಪನಿಗೆ ಇದೆ. ಈಗ ಕಂಪನಿಯ ಮುಖ್ಯಸ್ಥರಾಗಿ ಆನಂದ್ ಮಹೀಂದ್ರ ಇದ್ದಾರೆ. ಈ ಕಂಪನಿ ಮೌಲ್ಯಗಳ ಬಲವಾದ ತಳಪಾಯದ ಮೇಲೆ ನಿಂತು ಇಂದಿಗೂ ಯಶಸ್ವೀ ಎನಿಸಿಕೊಂಡಿದೆ. ಈ ಕುರಿತ ಸಣ್ಣ ಕಥೆ ಇಲ್ಲಿದೆ.
ಆಗ ಕೇಶುಭಾಯ್ ಮಹಿಂದ್ರಾ ಕಂಪನಿಯ ಚುಕ್ಕಾಣಿ ಹಿಡಿದಿದ್ದ ಸಮಯ. ಸ್ಕಾರ್ಪಿಯೋ ಕಾರು ಬಹು ಜನಪ್ರಿಯವಾಗಿತ್ತು. ಇದರಲ್ಲಿ ಕೆಲ ಮಾರ್ಪಾಡು ಮಾಡಿದರೆ ಕ್ಷಮತೆ ಹೆಚ್ಚುತ್ತದೆ ಎಂದು ಇಂಜಿನಿಯರ್ಗಳು ವಿನ್ಯಾಸ ಬದಲಿಸಿದರು. ಪರಿಣಾಮವಾಗಿ ಜೀಪಿನ ಹಿಂದುಗಡೆ ಸಾಮಾನ್ಯವಾಗಿ ಇರಿಸುವ ಸ್ಟೆಪ್ನಿ/ಎಕ್ಷ್ಟ್ರಾ ಟೈರ್ ಅನ್ನು ಗಾಡಿಯ ಅಡಿಬದಿಗೆ ಜೋಡಿಸುವ ಯೋಜನೆ ಮಾಡಿದರು. ಹೀಗೆ ಮಾಡಿದರೆ ವಾಹನದ ಕ್ಷಮತೆ ಹೆಚ್ಚಿ ಅನುಕೂಲವಾಗುವುದೆಂದು ಕಂಡುಕೊಂಡರು.
ಜನರಿಗೆ ವಾಹನದ ಹಿಂದುಗಡೆ ಟೈರು ಇರಬೇಕೆಂದು ಬಯಕೆ ಇತ್ತು. ಹಾಗಿದ್ದರೇ ವಾಹನ ಮಾಲೀಕರಿಗೆ ಒಂದು ರೀತಿಯ ಸಮಾಧಾನ ಕೊಡುವುದು ಸಂಗತಿ ಎಂದು ತಿಳಿಯಿತು.
ಹಾಗಾಗಿ ಗ್ರಾಹಕರಿಗೂ ತೃಪ್ತಿಯಾಗಿ, ವಾಹನದ ವಿನ್ಯಾಸವೂ ತಕ್ಕುದಾಗಿ ಇರುವ ಯೋಚನೆ ಮಾಡಿದರು. ಹಿಂದುಗಡೆ ನೋಡಲಿಕ್ಕೆ ಖಾಲಿ ಟಯರಿನಂಥ ಆಕಾರ ಇಡುವುದು. ಹೆಚ್ಚುವರಿ ಚಕ್ರ ಅಡಿಗೆ ಇರಿಸುವುದು ಎಂಬ ಉಪಾಯ ಹೊಳೆಯಿತು.
ಈ ವಿಚಾರ ಕೇಶುಭಾಯಿ ಅವರ ಎದುರು ಬಂದಾಗ, ಒಂದೋ ಕೆಳಗಡೆ ಟೈರು ಇಟ್ಟು ಹಿಂದೆ ಖಾಲಿ ಇಡಿ. ಇಲ್ಲವೇ ಹಾಗೆಯೇ ಹಿಂದೆ ಟೈರು ಕಾಣುವಂತೆ ಬಿಟ್ಟುಬಿಡಿ.ಮಹಿಂದ್ರ ಕಂಪನಿಯ ಉತ್ಪನ್ನಗಳಲ್ಲಿ "ತೋರುವುದು ಒಂದು, ಇರುವುದು ಇನ್ನೊಂದು" ಎಂಬ ಸಂದೇಶ ರವಾನೆಯಾಗುವುದು ಬೇಡ. ಹಾಗೆ ಮಾಡುವುದೂ ಬೇಡ. ಮೌಲ್ಯಕ್ಕಾಗಿ ಮಹಿಂದ್ರ ಕಂಪನಿ ಹೊರತು ಈ ರೀತಿಯ ತೋರುಗಾಣಿಕೆ ಸಲ್ಲದು ಎಂದುಬಿಟ್ಟರು.
ಅದು ವ್ಯವಹಾರ ನೈತಿಕತೆ. ಕಂಪನಿಯ ಮೌಲ್ಯ. ಕೋಟ್ಯಂತರ ಜನ ವಿಶ್ವಾಸ ಇರಿಸಿದ ಕಂಪನಿಯಾಗಿ ಇಂದಿಗೂ ಮಹಿಂದ್ರಾ ಸಂಸ್ಥೆಯ ವಾಹನಗಳು ನಮ್ಮ ಎದುರು ಭರ್ರೆಂದು ಓಡುವುದು ಕಂಡಾಗ ಇದು ನೆನಪಾಗುತ್ತದೆ.
#ಕಾಮರ್ಸ್_ಕನ್ನಡಿಗ
#ಮಹೇಂದ್ರ_ಸಂಕಿಮನೆ
.
.
.
.
.
.
..
.
.
Comments