ಶಿಕ್ಷಕರೆಂದರೆ ಯಾರು ಎನ್ನುವುದು ಸರಳ ಪ್ರಶ್ನೆ . ಉತ್ತರ ಹೇಳುವಾಗ ಯೋಚಿಸಬೇಕಾಗುತ್ತದೆ.
ವರ್ಣ ಮಾತ್ರ ಕಲಿಸಿದಾತ ಗುರುಂ ಎಂಬುದು ಹಳೆ ಮಾತಾಯಿತು. ಆದರೆ ಕಾನೂನು ಏನು ಹೇಳುತ್ತದೆ?
ಕೋರ್ಟು ಏನು ಒಪ್ಪಿಕೊಳ್ಳುತ್ತದೆ ಅದು ಮಾತ್ರ ಅಧಿಕೃತ ಸತ್ಯ. ಇದು ನಮ್ಮಲ್ಲಿ ಅಂತಿಮ.
ಶಿಕ್ಷಕರಾಗುವುದು ಎಂದರೆ ಅದಕ್ಕೊಂದು ಶಿಕ್ಷಣ ಸಂಬಂಧಿ ಕಲಿಕೆ ಬೇಕು. ಅದಿದ್ದರೆ ಮಾತ್ರ ಕಲಿಸುವ ಮಾನ್ಯತೆ. ಕಲಿಸಲು ಬರುತ್ತದೆ ಎಂದ ಮಾತ್ರಕ್ಕೆ ಕಲಿಸಲು ಹೋಗುವುದಿಲ್ಲ ಕಾನೂನು ನಿಗದಿ ಪಡಿಸಿದ ಮಾನದಂಡಗಳನ್ಗನು ಶಿಕ್ಷಕರು ಪಾಲಿಸಬೇಕಾಗುತ್ತದೆ. ಅರ್ಹ ವಿದ್ಯಾರ್ಹತೆ ಇದ್ದರೆ ಮಾತ್ರ ಶಕ್ಷಣ ಸಂಸ್ಥೆಯಲ್ಲಿ ಕಲಿಸಬಹುದು. ಇಲ್ಲವಾದರೆ ಶಿಕ್ಷಣದ ಕ್ವಾಲಿಟಿಗೆ ಅದು ಧಕ್ಕೆ ತರುತ್ತದೆ. ಕೇವಲ ಶಿಕ್ಷಣದ ಹಕ್ಕು ಎಂದ ಮಾತ್ರಕ್ಕೆ ಅದು ಕಳಪೆ ಶಿಕ್ಷಣ ಆಗಬಾರದು ಅದು ಗುಣಮಟ್ಟದ ಶಿಕ್ಷಣ ಆಗಬೇಕಾಗುತ್ತದೆ. ಗುಣಮಟ್ಟ ದೊಡನೆ ರಾಜಿ ಆದರೆ ಆ ಶಿಕ್ಷಣಕ್ಕೆ ಮೌಲ್ಯವಿರುವುದಿಲ್ಲ. ಹೀಗೆ ಗುಣ ಮಟ್ಟದ ಶಿಕ್ಷ ನೀಡಲು ಶಿಕ್ಷಕರು ಗೊತ್ತುಪಡಿಸಿದ ತರಬೇತಿ ವಿದ್ಯಾರ್ಹತೆ ಹೊಂದುರುವುದು ಅವಶ್ಯಕ. ಹೀಗೆಂದು ಹೇಳಿದ್ದು ಭಾರತದ ಸರ್ವೋಚ್ಛ ನ್ಯಾಯಾಲಯ. ಪ್ರಾಥಮಿಕ ಶಿಕ್ಷಣಕ್ಕೆ ಬಿ ಎಡ್ ಸೂಕ್ತವಾದ ಅರ್ಹತೆ ಅಲ್ಲ ಎಂದಿದೆ. ಪ್ರಾಥಮಿಕ ಶಿಕ್ಷಣ ಕಲಿಸಲು ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ ಸೂಕ್ತ ಎಂದು ಎನ್ಸಿಟಿಈ ನಿಗದಿ ಪಡಿಸಿದೆ ಅದೇ ಮಾನದಂಡ ಅನುಸರಿಸಬೇಕು ಎಂದು ಹೇಳಿದೆ. ಬಿಎಡ್ ಪದವಿಯು ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಸ್ಕೂಲ್ ಗಳಿಗೆ ನಿಗದಿ ಪಡಿಸಿದೆ ಎಂದು ಉಲ್ಲೇಖಿಸಿದೆ. ಕೆಲವು ಕಡೆ ಶುಕ್ಷಕರ ಕೊರತೆಯ ಕಾರಣಕ್ಕೆ,ನಾನಾ ಕಾರಣಕ್ಕೆ ಬಿ ಎಡ್ ಆದವರನ್ನು ಶಿಕ್ಷಕರಾಗಿ ನೇಮಿಸಿಕೊಳ್ಳುತ್ತಾರೆ. ಮತ್ತು ಬಹತೇಕ ಶಿಜ್ಷಕರಾಗುವ ಎಲ್ಲರೂ ಬಿ ಎಡ್ ಪೂರೈಸುತ್ತಾರೆ. ಆದರೆ ಈಗ ಬಂದ ತೀರ್ಪಿನಡಿ ನೋಡುವುದಾದರೆ ಬಿ ಎಡ್ ಮಾಡಿದವರು ಪ್ರೌಢ ಶಿಕ್ಷಣ ಕ್ಕೆ ಮಾತ್ರ ಕಲಿಸಲು ಅರ್ಹರು ಎಂದಾಗುತ್ತದೆ. ಮತ್ತು ಪ್ರಾಥಮಿಕ ಅಂದರೆ ಒಂದರಿಂದ ಐದನೇ ತರಗತಿವರೆಗೆ ಕಲಿಸುತ್ತಿರುವ ಬಿಎಡ್ ಪದವಿ ಹೊಂದಿದವರು ಅರ್ಹರಾಗುತ್ತಾರೆ. ಅಥವಾ ಅವರು ಸೇವೆಗೆ ಸೇರಿದ ಎರಡು ವರ್ಷದೊಳಗೆ ಬೇಕಾದ ವಿದ್ಯಾರ್ಹತೆ ಹೊಂದಲೇಬೇಕಾಗುತ್ತದೆ. ಅಂದರೆ ಇಲ್ಲಿ ವರೆಗೆ ಕಲಿತವರ ಶಿಕ್ಷಣದ ಮಾನ್ಯತೆ ಏನು ಎಂಬುದು ಯಕ್ಷ ಪ್ರಶ್ನೆ ಆಗುತ್ತದೆ.ಇಂದಿಗೂ ಸಹ ಎಲ್ಲ ಪರೀಕ್ಷೆಗಳಿಗೂ ಶಿಕ್ಷಕರಾಗಲು ಬಯಸುವವರು ಬಿ ಎಡ್ ಹೊಂದಿರಲೇಬೇಕಾಗುತ್ತದೆ. ಅದರ ಆಧಾರದ ಮೇಲೆ ನೇಮಕಾತಿಗಳು ನಡೆದಿವೆ.
ಸ್ಥೂಲವಾಗಿ ಹೇಳುವುದಾದರೆ ಪ್ರಾಥಮಿಕ ಶಿಕ್ಷಣ ಅಂದರೆ ಒಂದರಿಂದ ಐದನೇ ತರಗತಿವರೆಗೆ ಕಲಿಸಲು ಡಿಪ್ಲೊಮಾ ಇನ್ ಎಜುಕೇಶನ್ ಸೂಕ್ತವಾದ ವಿದ್ಯಾರ್ಹತೆ. ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಕ್ಕೆ ಬ್ಯಾಚುಲರ್ ಇನ್ ಎಜುಕೇಶನ್ ಪದವಿ ಬೇಕು. ಉನ್ನತ ಶಿಕ್ಷಣ ಕಲಿಸಲು ಮಾಸ್ಟರ್ ಇನ್ ಎಜುಕೇಷನ್ ಅಗತ್ಯ. ಪದವಿ ಶಿಕ್ಷಕರಾಗಲು ಎನ್ಇಟಿ, ಎಸ್ಎಲ್ಈಟಿ ಅಥವಾ ಪಿಎಚ್ಡಿ ಹೊಂದಿರಬೇಕು. ಇದು ಶಿಕ್ಷಕರಿಗಿರುವ ಮಾನದಂಡ.
ಈ ಮಾನದಂಡವನ್ನು ಎನ್ಸಿಟಿಈ, ಸರ್ಕಾರ, ಯುಜಿಸಿ ಮುಂತಾದ ಸಂಸ್ಥೆಗಳು ನಿರ್ಧರಿಸುತ್ತವೆ.
ಹಾಗಾಗಿ ಯಾವುದೆ ವಿಷಯದಲ್ಲಿ ಪದವಿ ಪಡೆದರೂ ಶಿಕ್ಷಕರಾಗಲು ವಿಶೇಷ ಪದವಿ ಹೊಂದುವುದು ಈಗ ಅನಿವಾರ್ಯವಾಗಿದೆ. ಅದರ ಜೊತೆ ಅನುಭವವೂ ಪರಿಗಣನೆಗೆ ಬರುತ್ತದೆ.
ಕಾಲ ಕಾಲಕ್ಕೆ ಮಾನದಂಡಗಳೂ ಬದಲಾಗುತ್ತವೆ. ಅವುಗಳ ಅರಿವು ಶಿಕ್ಷಕರಾಗಬಯಸುವವರಿಗೆ ಅತ್ಯಗತ್ಯ.
ಇವಿಷ್ಟು ಕೇವಲ ಅಕಾಡೆಮಿಕ್ ಮಾನ್ಯತೆ, ಮಾನದಂಡಗಳು. ಆದರೆ ವಾಸ್ತವಕ್ಕೆ ಇಳಿದಾಗ ಶಿಕ್ಷಣ ಕ್ಷೇತ್ರ ಏನು ಎಂಬ ಅರಿವು ಬರುತ್ತದೆ.
(ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಗಳು ತೀರಾ ವಿಭಿನ್ನವಾಗಿವೆ. ಅವುಗಳ ಉದ್ದೇಶವೂ ಬೇರೆ ಕಲಿಕಾ ವಿಧಾನವೂ ಬೇರೆ ಬೇರೆ. ಮಕ್ಕಳಿಗೆ ಪಾಠ ಮಾಡಬೇಕು. ಪ್ರೌಢ ರಿಗೆ ಉಪನ್ಯಾಸ, ಯುವಕರಿಗೆ ಅಧ್ಯಾಪನ, ವಿಚಾರ ವಿಮರ್ಶೆ.
Comments