ಇದು ಸ್ಪರ್ಧಾತ್ಮಕ ಯುಗವೆಂಬ ವಾಕ್ಯ ಸವಕಲಾಗಿದೆ. ಆದರೆ ಸ್ಪರ್ಧೆ ತಾಜಾ ಆಗಿಯೇ ಇದೆ. ಸ್ಪರ್ಧೆ ಎಂಬ ಗಾಣಕ್ಕೆ ಜೀವನವೆಂಬು ಕಬ್ಬು ಸಿಕ್ಕುಕೊಂಡಿದೆ. ಹಾಗಾಗಿ ಜೀವನದೊಳಗೆ ಸ್ಪರ್ಧೆ ಎನ್ನುವುದಕ್ಕಿಂತ ಸ್ಪರ್ಧೆ ಒಳಗೆ ಜೀವನ ಎನ್ನುವುದೇ ಸೂಕ್ತ ಎನಿಸುತ್ತದೆ. ಈಗಿನ ಪೋಷಕರಿಗೆ ಮಕ್ಕಳನ್ನು ಸ್ಪರ್ಧಾಳುಗಳಾಗಿಸುವ ಚಿಂತೆ ಅನಿವಾರ್ಯತೆ ಎರಡು ಎದುರಾಗಿರುತ್ತದೆ. ತರಗತಿಗೆ ಮೊದಲು ಬರಬೇಕು, ನಂತರ ರ್ಯಾಂಕುಗಳನ್ನು ತರಬೇಕು, ಗೋಲ್ಡ್ ಮೆಡಲ್ಲು... ಪ್ಲೇಸ್ಮೆಂಟು ... ಉಫ್ ಚಿಂತೆಯೇ ಚಿಂತೆ. ಇದಕ್ಕೆ ಕೊನೆ ಇದೆಯೋ?.
ಮಕ್ಕಳು ಮುಂದಿರಲು ತಮ್ಮ ಜೀವನವಿಡೀ ತೇಯ್ದ ಜನರೇಶನ್ನು ಮಕ್ಕಳು ನೆಮ್ಮದಿ ಆಗಿರಲು ಬಯಸುತ್ತದೆ. ಇದು ಜೀವನದಲ್ಲಿ ತಲೆಮಾರು, ಪರಂಪರೆ ಹುಟ್ಟಿದ ಊರು ಮೀರಿ ಬದುಕು ಕಟ್ಟಕೊಂಡವರ ಕತೆ. ಅವರಿಗೆ ಮಕ್ಕಳೇ ಆಸ್ತಿ. ಉದ್ಯೋಗವೇ ಜೀವನ. ಹಾಗಾಗಿ ಅವರ ವಾದಕ್ಕೂ ಒಂದು ಹುರುಳಿದೆ, ಎಂಬುದನ್ನು ತಳ್ಳಿ ಹಾಕಲಾಗದು.
ಜೀವನದ ಸತ್ಯ, ಅನುಭವದ ಎದುರು ಕೆಲವಯ ಸಿದ್ಧಾಂತಗಳು ಸರಿದು ನಿಲ್ಲುತ್ತವೆ. ಆರಾಮವಾಗಿ ನಿಲ್ಲುವುದೇನೋ ಸರಿ ಆದರೆ ಕಾಲ ನಿಂತವರ ಹಿಂದಿಕ್ಕಿಮುಂದೆ ಹೋದರೆ..? ಓಡುವುದೇ ಜೀವನ..ಮುನ್ನಡೆಯೇ ಬದುಕು. ನಿರಂತರ ಕಲಿಕೆ-ದುಡಿಮೆ ಅದಕ್ಕೆ ಮುನ್ನುಡಿ.
Comments