top of page

ಏನೋ ಒಂಥರಾ....

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Oct 24, 2024
  • 2 min read

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು ತಣ್ಣಗೆ ಜಾರಿಹೋಗಿದೆ. ನಯಾ ಪೈಸಾ ಇಲ್ಲ. ಎರಡೆರಡು ಡಿಗ್ರಿ ಇದೆ ಆದರೆ. ಏನುಮಾಡಬೇಕು ತೋಚದೆ ತಣ್ಣಗೆ ಕೂತು ಮನಕ್ಕೆ ಮಂಕು ಹಿಡಿದಿದೆ ಅವನಿಗೆ. ಯಸ್ ಈ ಸಲ ಹೊಸ ಪ್ರೊಜೆಕ್ಟ್ ಮಾಡಲೇಬೇಕು ಅಂತ ಡಿಸೈಡ್ ಮಾಡಿ ಮನೆ ಹತ್ತಿರದ ಮರದ ಬಳಿ ಕೂತವನಿಗೆ ಕಾಲ್ ಬಂತು.


ಹಾಯ್ ನಿಶೂ,... ಹೌ ಆರ್ ಯೂ..? ಮನೆಲಿದಿಯಂತೆ...?


ಹೌದು. ನಿಂಗ್ಯಾರಂದ್ರು. ಹೇಗೆ ಇಷ್ಟು ಸಡನ್ ಆಗಿ ನನ್ ನೆನಪು ಆಯ್ತು...!!



ಯಾಕೆ ಕಾಲ್ ಮಾಡ್ಬಾರದಿತ್ತಾ.. ಓಕೆನಪ್ಪ. ಕಟ್ ಮಾಡ್ತೀನಿ ತಗೋ. ಸುಖವಾಗಿದ್ದೋರಿಗೆ ಯಾಕೆ ಡಿಸ್ಟರ್ಬ್ ಮಾಡೋದು...


ಛೇ ಛೆ ಹಾಗಲ್ಲ, ಮಾತಿಗಂದೆ ಅಷ್ಟೇ. ಹ್ಯಾಪಿ ಟು ಹಿಯರ್ ಯೂ...ಯಸ್ ಟೆಲ್ ಮಿ.... ತುಂಬ ದಿನ ಆಯ್ತು ಅಲ್ವಾ ಮಾತಾಡಿ....


ಹೂಂ ಕಣೋ.. ನಮ್ ವಾಟ್ಸಾಪ್ ಗ್ರುಪ್ ಲಿಲಿ ಚೆಕ್ ಮಾಡ್ದೆ, ನಿನ್ ನೆನಪು ಆಯ್ತು ಸೋಕಾಲ್ ಮಾಡಾತಾ ಇದಿನಿ. ಮನೆ ಕಡೆ ತಣ್ಣಗೆ ಆರಾಮಾಗಿ ಇದಿಯಾ...ಅನ್ನು.


ಹೌದು ತುಂಬಾ ರಿಲ್ಯಾಕ್ಸ್ ಆಗಿದಿನಿ. ಊಟ ತಿಂಡಿ ನಿದ್ದೆ . ರಿಪೀಟ್. ಅಷ್ಟೇ.


ಯೂ ಆರ್ ಸೋ ಲಕ್ಕಿ. ಐ ವಿಶ್ ಟು ಹ್ಯಾವ್ ಸಚ್ ಲೈಫ್ ..ಬಟ್, ಬಾಸ್ ಕಾಟ.


ಬಿಟ್ಬುಡು. ನಿನ್ ಕೆಲಸ ನಾನ್ ಮಾಡ್ತೀನಿ ನೀನ್ ಹಾಯಾಗಿರು ಕೆಲವು ದಿನ...ಏನಾಗುತ್ತೆ..


ಅಂತಿಯಾ ಅಂತಿ ಹಿಂಗೆ ಅಂತಿಯಾ ನೀನು. ನಿನಗೆ ಕೆಲಸ ವಹಿಸಿದ್ರೆ, ಮತ್ತೆ ನನಗೆ ವಾಪಸ್ ಕೆಲಸ ಇರಲ್ಲ...ಬೇಡ ಮಾರಾಯಾ..ನೀನೆನಂತ ಗೊತ್ತು ನಂಗೆ.


ಹೂಂ ..ಆಯ್ತು ಬಿಡು. ನೀನು ಸೆಲ್ಫಿಶ್ ಅಂತ ಗೊತ್ತು...ಬಿಡು ನಿನ್ ಕೆಲಸ ನೀನೇ ಇಟ್ಕೊ...


"ಹಾಂ, ಒಂದ್ ಪ್ರೊಜೆಕ್ಟ್ ಇದೆ. ನೀನು ಅದ್ಕೆ ಸೂಟೆಬಲ್ ಅನಿಸ್ತು. ಸೋ ನಿನಗೆ ಕಾಲ್ ಮಾಡಿ ಲಿಂಕ್ ಮಾಡೋಣ ಅನಿಸ್ತು. ಅದಿಕ್ಕೆ ಫೋನ್ ಮಾಡಿದೆ. ಕ್ಲೈಂಟ್ ಡಿಟೇಲ್ಸ್ ಕೊಡ್ತೀನಿ. ಮಾತಾಡು. ಎಷ್ಟು ದಿನ ಅಂತ ಹೀಗೇ ಹಠ ಹಿಡಿದು, ಮನೆಲ್ ಕೂತಿರ್ತಿಯಾ, ಟ್ಯಾಲೆಂಟ್ ಇದ್ದೂ ಯಾಕೆ ಯೂಸ್ ಮಾಡೊಲ್ಲ. ದಡ್ಡ ನೀನು. ಮೊದಲು ಮಾತಾಡು. ಈ ಪ್ರೊಜೆಕ್ಟ್ ಗೆ ಸೈನ್ ಮಾಡು. ಲೈಫ್ ಟ್ರಾಕ್ ಗೆ ಬಾ... ನೀನು ಹಂಗೇ ಆಗ್ಬೇಕು ಅಂದ್ರೆ ಆಗಲ್ಲ...ಮೂವ್ ಆನ್... ಹೆಲೋ ಕೇಳಿಸ್ತಾ ಇದೆಯಾ..."


ಲೌಡ್ ಸ್ಪೈಕ್ ಆನ್ ಆಗೇ ಇದೆ. ಆ ಮಾತು ಕೇಳ್ತ ಇದೆ. ಇತ್ತ ನಿಶಾಂತ್ ಮನಸು ಮತ್ತನೋ ಆಲೋಚನೆಗೆ ಹೊರಟಾಗಿತ್ತು.


ಬರಲಿರೋ ಪ್ರಾಜೆಕ್ಟ್‌ ಬಗ್ಗೆ ಅದಾಗಲೇ ಪ್ರೊಕಾಸ್ಟಿನೇಷನ್ ಸ್ಟಾರ್ಟಾಗಿತ್ತು.



ಅತ್ತ ಕಡಯಿಂದಲೇ ಕಾಲ್ ಕಟ್ ಆಯಿತು.



ನಾನು ಈ ಪ್ರೊಜೆಕ್ಟ್ ಗೆ ಒಪ್ಕೊಂಡ್ರೆ. ಮಿನಿಮಮ್ ಮೂರು ಲಕ್ಷ ಬರುತ್ತೆ. ಕರ್ಚು ಕಳದು ಒಂದು ಲಕ್ಷ ಉಳಸ್ಬಹುದು. ಆದ್ರೆ ನನ್ ಒಂದ್ ವರ್ಷ ತೊಗೊಂಡ್ರೆ...ನಿಜಕ್ಕೂ ಇದು ವರ್ಥ್ ಅನಿಸುತ್ತಾ...ಹಳೆ ಜಾಬ್ ಥರ ಜಾಬ್ ಮಾಡಿದ್ರೆ ಬೆಟರ್. ಇದಕಿಂತ ಜಾಸ್ತಿಬರುತ್ತೆ. ಬಟ್ ಅದ್ರಲ್ಲಿ ಗ್ರೌಥೇ ಇಲ್ಲ. ಏನ್ಮಾಡೋದು. ಇಲ್ ನೋಡಿದ್ರೆ ಆಫರ್ ಬರ್ತ ಇದೆ. ಅಯ್ಯೋ ಏನ್ ಮಾಡ್ಲಿ ಗೊತಾಗ್ತಾ ಇಲ್ವಲಪಾ....



ಆ ಗೊಂದಲದಲ್ಲಿ ಮನೋ ಸ್ಥಿತಿಯಲ್ಲಿ ಅವನ ಮೊಬೈಲ್ ಬ್ಯಾಟರಿ ಲೋ ಆಯ್ತು. ಬ್ಯಾಟರ್ ಚಾರ್ಜ್ ಹಾಕಲು. ರೂಮಿಗೆ ಹೋದ.

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ...

 
 
 

Comentários


Post: Blog2_Post

Subscribe Form

Thanks for submitting!

©2018 by aksharamaya.

bottom of page