ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ ಭರಪೂರ ಹೊಡೆದಾಗ ಇಡೀ ನಗರ ಸ್ತಬ್ಧ. ಅಕ್ಷರಶಃ ದ್ವೀಪದಂತಾಗಿತ್ತು. ರಸ್ತೆ ಮೇಲೆ ಹರಿವ ನೀರು ಕಂಡ ನನಗೆ ನಮ್ಮೂರ ಹೊಳೆಯ ನೋಡಿದಂತಾಗಿತ್ತು.
ಸೋಷಿಯಲ್ ಮೀಡಿಯಾ ದೊಳಗೆ ಕಮೆಂಟುಗಳ ಸುರಿಮಳ. ಜೊಮಾಟೊ ಸ್ವಿಗಿಯಂತಹ ಡೆಲಿವರಿ ಬಾಯ್ಸ್ ಬಿಟ್ಟು ಯಾರೂ ಓಡಾಟ ಮಾಡತಾ ಇರಲಿಲ್ಲ. ಹಾಗೇ ನೋಡಿದರೆ ಎಂಟು ಹನ್ನೊಂದು ಟಿಪಿಕಲ್ ಊಟದ ಟೈಮು. ಹಸಿವೆ ಮಳೆಯ ಎದ್ದರು ಥರ ಥರ ನಡುಗಿತ್ತು.
ಮಲೆನಾಡಿನ ಮಳೆಗೂ ಬೆಂಗಳೂರಿಙ ಮಳೆಗೂ ವ್ಯತ್ಯಾಸ ಇದೆ. ಇದು ಸಿಟಿ. ಅದರಲ್ಲೂ ಮೆಟ್ರೋ ಸಿಟಿ. ಹಿಗ್ಗಾ ಮುಗ್ಗ ಬೆಳೆಯುತ್ತ, ಆ ಬೆಳವಣಿಗೆ ಗುಂಗಲ್ಲಿ ಮಾಲ್ಗಳು ಕೆರೆ ಗಳನ್ನೇ ಆಪೋಶನ ತೆಗೆದುಕೊಂಡು ಮೇಲೆದ್ದರೆ, ರಾಜ ಕಾಲುವೆಗಳು ಸಾಲು ಸಾಲು ಮನೆಗಳಾದವು. ನೀರಿನ ದಾರಿ ಮುಚ್ಚಿಯೇ ಹೋಯಿತು. ಯಾವ ಕಾರಣವೋ ಏನೋ ಮಳೆ ಬರದೆ ಇದ್ದ ಪರಿಣಾಮ ಯಾರಿಗೂ ಅರಿವಿಗೆ ಬರಲಿಲ್ಲ. ಚಲ್ತಾ ಹೇ, ಏನಾಗಲ್ಲ ಬಿಡಣ್ಣೋ..ಆಮೇಲ್ ನೋಡ್ಕಂಡ್ರಾಯ್ತು... ಅಂತು ದಶಕಗಳೇ ಕಳದ್ವು. ಅಂತು ಅಂತಹ ಒಂದೊಂದು ದಿನಗಳು ಬಂದು ಜ್ಞಾಪಿಸಿದವು. ಹೇ ಮನ್ಷರಾ ನೀರು ಕುಡಿರಿ. ಜನನ ಕೆರೆಗಳನಲ್ಲ. ದಾರಿ ಬಿಡಿ. ಕಾಲುವೆಗಳನ್ನು ಹಾಗೆ ಇಡಿ ಅಂತ ಅಂದ್ರೂ ರಾಜಕಾರಣಿಗಳು, ದುಡ್ ಮಾಡೋ ರಿಯಲ್ ಎಸ್ಟೇಮ್ ಲಾರ್ಡೆ್ಗಳು ಎಲ್ ಕೇಳ್ಸ್ಕೊಂಡರು...
ಒಟ್ನಲ್ಲಿ ಯಾರದೋ ಕೈಲಿ ಬೆಂಗಳೂರ್ ಬ್ಯಾಡ್ ಸಿಟಿ ಅಂತ ಇಂಟರ್‌ನ್ಯಾಷನಲ್ ಲಿ ಅನ್ಸಕೊಳೋ ಹಾಗಾಯ್ತು.
ಅಲಾ ಕೋಟಿ ಕೋಟಿ ಜನ ಬಂದ್ರೆ, ಎಷ್ಟಾದರೂ ತಡ್ಕೊಬೇಕು ಈ ಸಿಟಿ. ಹೇಳಿ.
ಹಾಗಂದ್ರೂ ರೈಲು, ಪ್ಲೈಟು ಹತ್ತಿ ಜನ ಬರ್ತಾ ಇದಾರೆ ಹೊರ್ತು. ಯಾವ ಮಕ್ಳು ಇಲ್ಲಿ ಪ್ರಾಬಲ್ಂ ಇದೆ ಅಂತ ವಾಪಸ್ ಹೋದ್ರು...ಸುಮ್ನೆ ಅಂತಾರಷ್ಟೆ. ನಂದೂ ಇರಲಿ ಅಂತ.
ಒಟ್ನಲ್ಲಿ ಈ ಪಾಟಿ ಮಳೆ ಒಂದಷ್ಟು ಅವಾಂತರ ಮಾಡಿತು ಅನ್ನೊಕಿಂತ ಎಚ್ಚರಿಕೆ ಅನ್ಕೊಂಡ್ರೆ ಒಳ್ಳೆದೇನೋ.!!
ಗಾರ್ಡನ್ ಸಿಟಿಗೆ ವರುಣ ದೇವ ನೀರ್ ಹಾಕೊಕೆ ಬಂದ. ಆದರೆ ಇದು ಕಾಂಕ್ರೀಟ್ ಸಿಟಿ ಆಗಿದೆ ಅಂತ ಅವನಿಗ್ಎ ಹೇಳೋರ್ಯಾರು.
ಯಾರದ್ರು ಒಂದು ಆ್ಯಪ್ ಮಾಡಬುಡ್ರಪಾ ಹೋಗ್ಲಿ ಅತ್ತಾಗೆ.....
Comments