top of page
Writer's pictureಮಹೇಂದ್ರ ಸಂಕಿಮನೆ

ನಾನು ನಾನಾಗಿರಲು


ನನ್ನ ಹೃದಯವನು ನೆಲದ ಮೇಲಿಟ್ಟು

ನಿನ್ನ ಅಡಿಗಳಿಗೆ ಹಾಸು ಇಟ್ಟಿದ್ದೆ


ಭಾವಗಳ ಯಾವುದೇ ಗೋಜಿಗೆಡೆಗೊಡದೆ

ಹೃದಯ ಮಿಡಿತವು ತಂಪುಧೂಳಲಿ ಮಿಳಿತಗೊಂಡು

ಕಣಕಣಗಳಲೂ ಪ್ರಾಕೃತಿಕನಾಗುವಾಸೆ


ದಾರ್ಷ್ಟ್ಯ ಅಹಂ ಗಳಾವುದನ್ನೂ ನಾ ಬಿಡೆ

ನೀ ಮಾಡಿದೆ ಎಂದು ನಾಪ್ರತಿ ಎಸಗಲಾರೆ


ಪಡೆದ ಅಗುಳಿಗೊಂದರಂತೆ ಉಪಕಾರಗೈವೆ

ನಿನ್ನ ಮಾತುಗಳಿರಲಿ ಕೊನೆಗೆ ನಿನ್ನ ಬಳಿಯೆ


ಮರೆತರೂ ನನ್ನನ್ನು ನೆನಪಿಡುವೆ ನಿನ್ನನ್ನು

ಅನ್ನದಗುಳಿಗಾಗಿ ಜಗಳ ಬೇಡ

ತಿನ್ನುವುದು ಇನಿತಿರಲು ಬೇರೆಮಾತುಗಳೇಕೆ


ಬರಲಿ ಬಿಡು ಬಳಿಸಾರಿ ಉರುಳೆ ಕಾಲದ ಚಕ್ರ

ಬೇಸರವು ನನಗಿಲ್ಲ ಮೋಸ ವಂಚನೆ ಯಿಂದ


ತಪ್ಪಿನಲಿ ಮಾತೆದ್ದು ಸರಿಗಳಲಿ ಮೌನಗಾನ

ಇದೆಂತ ಪರಿಯ ಬದುಕು ಸತ್ವ ವಿಹೀನ


ಬಂದ ಕಾಲಕೆ ನಾ ಅಂದ ಮಾತುಗಳು ಸರಿಯಾಗೆ

ನೀ ಅಹುದೆಂದು ನಿನ್ನೊಳಗೆ ಬದಲಾಗೆ

ಸರಿಗೊಂಡು ಬದುಕು ಚಲಿಸೆ ಲಘುವಾಗಿ

ಕಾಲದಲಿ ಬೆರೆತು ಹಸನಾಗಲಿಬಾಳು


-ಮಹೇಂದ್ರ ಸಂಕಿಮನೆ

267 views0 comments

Recent Posts

See All

ಈ ವರ್ಷ...

ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ...

ಏನೋ ಒಂಥರಾ....

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು...

Comments


Post: Blog2_Post
bottom of page