top of page
  • Writer's pictureಮಹೇಂದ್ರ ಸಂಕಿಮನೆ

" ಹೋಗಬೇಡ ನನ್ನ ಬಿಟ್ಟು"

ಹೋಗೊ ಮಾತನ್ನೆ ನುಡಿಯಬೇಡ

ನಡೆವ ಹಠವನ್ನು ಮಾಡಬೇಡ..


ನಿನ್ನ ತಬ್ಬಿ ನಾ ಕುಳಿತಿರೆ

ನಿನ್ನ ಅಪ್ಪಿ ನಾ ಕುಳಿತಿರೆ

ಇಂದು ನಡೆವೆ ಎಂದೆಂತು ನುಡಿಯಬೇಡ..


ನನ್ ಉಸಿರೆ ನಿಂತಂತಿದೆ

ನಾ ಪೂರಾ ಸೂರೆಯಾದಂತಿದೆ

ಇಂಥ ಮಾತನ್ನು ನೀ ನುಡಿವೆ ಏಕೆ?

ನಡೆವ ಹಠವನ್ನು ಮಾಡಬೇಡ..

ಹೋಪ ಮಾತಂತು ಬೇಡ ಬೇಡ


ನೀ ಕೊಂಚ ಆಲೋಚಿಸು

ನನ್ನ ಮತ್ತೆ ಆಲಂಗಿಸು..

ನೀ ಹೊರಟಾಗ ನಿಲಿಸದಿದ್ದರೆ ತಡೆದು

ಎದ್ದು ನಡೆವಾಗ ನೀನು, ನನ ಜೀವವೇ ಹೊರಟಂತೆ ಹೇ ನಲ್ಲೆ..

ನಡೆವ ಹಠವನ್ನು ಮಾಡಬೇಡ..

ನಡೆವ ಹಠವನ್ನು ಮಾಡಬೇಡ..


ನಿನ್ನಾಣೆ ನಿನೆನ್ನ ಜೀವ ಜಾಣೆ

ನನ್ನೀ ಮಾತು ಕೇಳು ಒಮ್ಮೆ

ನಡೆವ ಹಠವನ್ನು ಮಾಡಬೇಡ

ನಡೆವ ಮಾತನ್ನು ನುಡಿಯಬೇಡ..


ಕಾಲ ಬಂಧನದಿ ಈ ಜೀವನಯಾನ

ಆದರೆ..

ಚಂದ್ರ ಸಮಯದಲಿ ಸ್ವಾತಂತ್ರ್ಯವಿಹುದು

ಇದನೆಲ್ಲ ತೊರೆದು ಒ ನಲ್ಲೆ

ಜೀವನವಿಡೀ ಕಾಡಬೇಡ..

ನಡೆವ ಹಟವನ್ನು ಮಾಡಬೇಡ..


ಎಷ್ಟು ಮುದ್ದಾದ ಬಣ್ಣ ಹರಡಿದೆ ನೋಡು ನೀನು..

ಇಂದು ಪ್ರೀತಿ ಪ್ರೇಮವನೆ ಚೆಲ್ಲಾಡಿದೆ

ನಾಳೆಯಾ ಪರಿವೆ ಯಾತಕ್ಕೆ ಬೇಕು

ಇಂದಿನಾ ರಾತ್ರಿಯು ನಿಂತರೆ.. ಸಾಕು

ನೀ ನಡೆವ ಮಾತನ್ನು ಆಡಬೇಡ


ಉಸಿರೇ ಹೋದಂತಿದೆ..

ನಾ ಸೂರೆಯಾದಂತಿದೆ..

ನಡೆವ ಹಠವನ್ನು ಮಾಡಬೇಡ

ನಡೆವ ಮಾತನ್ನೇ ಆಡಬೇಡ


"ಭಾವಗೋಚರ"

ಭಾವಾನುವಾದ -ಆಜ್ ಜಾನೆ ಕಿ ಜಿದ್ ನ ಕರೋ

ಮಹೇಂದ್ರ ಸಂಕಿಮನೆ

11 views0 comments

Recent Posts

See All

ನೀರಿಗಾಗಿ ಹಾಹಾಕಾರ

ಪೃಥಿವ್ಯಾಂ ತ್ರೀಣಿ ರತ್ನಾಣಿ ಜಲಮನ್ನಂ ಸುಭಾಷಿತಂ| ಮೂಢೈಃ ಪಾಷಾಣಖಂಡೇಷು ರತ್ನ ಸಂಜ್ಞಾವಿಧೀಯತೇ|| ನಿಜವಾದ ರತ್ನಗಳೆಂದರೆ ನೀರು, ಆಹಾರ, , ಹಾಗೂ ಒಳ್ಳೆಯ ಮಾತು ಎಂದು ಸುಭಾಷಿತ ಹೇಳುತ್ತದೆ. ಇಂದಿಗೂ ಇದು ಅಪ್ಪಟ ಸತ್ಯ. ಇಂದು ದುಡ್ಡು ಎಲ್ಲರ ಬಳಿ

Post: Blog2_Post
bottom of page