top of page

ಭಾವಿಸಿರಲಿಲ್ಲ

  • Writer: ಮಹೇಂದ್ರ ಸಂಕಿಮನೆ
    ಮಹೇಂದ್ರ ಸಂಕಿಮನೆ
  • Mar 31, 2019
  • 1 min read

ಭಾವಿಸಿರಲಿಲ್ಲ..

ಒಂದು ವೇದನೇ ..ಇಷ್ಟು ತೀವ್ರವೆಂದು

ಒಂದು ಭಾವನೆ ಇಷ್ಟು ಗಾಢವೆಂದೂ..

ಭಾವಿಸಿರಲಿಲ್ಲ ಇದನು ಕಾಣುವ ತನಕ

ನನ್ನ ಮನವಿಷ್ಟು ಸೂಕ್ಷ್ಮವೆಂದೂ

ಒದ್ದಾಟ ಕಂಡು ನರಳುವುದೆಂದು

ಭಾವಿಸಿರಲಿಲ್ಲ..ನಿನ್ನ ನೋಡುವ ತನಕ


ನಿನ್ನ ನೋಡಲು ಸಾರಿ

ಸಾಕಾದರೂ ಬಂದು ಕುಳಿತು ಒರಗುವೆನೆಂದು ಭಾವಿಸಿರಲಿಲ್ಲ..

ಒಂದು ಸಣ್ಣನೆ ಮುಳ್ಳು

ಎದೆಗೆ ಚುಚ್ಚುವ ಭೀತಿ

ಕ್ಷಣದಿ ಬಾಯಿ ಬಿರಿಸುವುದೆಂದು ಅಂದುಕೊಂಡಿರಲಿಲ್ಲ...


ಒಂದು ಸಂವೇದನೆ ಇಷ್ಟು ಬಲವಾದುದೆಂದು

ನನ್ನೆ ಕೆಡಗುವುದೆಂದು ಅರಿವೆ ಇರಲಿಲ್ಲಾ...

ಕಲ್ಲದೆ ಇದು ಹೀಗೆ ಮಿಡಿಯುವುದೆಂದು

ಎಂದೂ ಭಾವಿಸಿರಲಿಲ್ಲ..


ಅರಿಯದ ಈ ಅನುರಾಗ ಇಷ್ಟು ಗಾಢವೆಂದೂ

ಅಂದುಕೊಂಡಿರಲೇ ಇಲ್ಲ..

ನಿನ್ನ ಯಾತನೆ ನನ್ನ ಅಲುಗಿಸುವುದೆಂದು

ನಾನು ಭಾವಿಸಿರಲಿಲ್ಲ


-ಮಹೇಂದ್ರ ಸಂಕೀಮನೆ

 
 
 

Recent Posts

See All
ಗಾಳಿ ಮಾತು...

ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ...

 
 
 

Comments


Post: Blog2_Post

Subscribe Form

Thanks for submitting!

©2018 by aksharamaya.

bottom of page