top of page
Writer's pictureಮಹೇಂದ್ರ ಸಂಕಿಮನೆ

ಹೊಳಪು


ಹೊಳಪು

ಹಸಿರು ಮರಗಳ ಸಾಲುದಾರಿ.

ಫುಟ್ಪಾತು ಆರಂಭಗೊಳ್ಳುವ ಅಷ್ಟು ಜಾಗದಲ್ಲಿ ಹಣ್ಣು ಹಣ್ಣು ಮುದುಕಿ ಒಂದಷ್ಟು ತೆಂಗಿನಕಾಯಿ, ಸವತೆಕಾಯಿ, ನಿಂಬೆಹಣ್ಣು, ಸಿಹಿಜೋಳ ಇಟ್ಟುಕೊಂಡು ಕೂತಿರುವುದು ಅಲ್ಲಿ ನಿತ್ಯ ಹಾದು ಹೋಗುವರ ಕಣ್ಣಿಗೆ ಸಾಧಾರಣವಾಗಿ ಕಾಣುತ್ತದೆ. ಅವಳು ವ್ಯಾಪಾರಕ್ಕೆ ಕೂತ ಜಾಗದ ಪಕ್ಕದಲ್ಲೇ ವಾರಾತ್ಯಂದಲ್ಲಿ ಭತ್ತದ ತೆನೆಗಳ ತೋರಣ ಮಾರುವವ ಸಹ ಬಂದು ತನ್ನ ಸರಂಜಾಮು ಹಾಕಿಕೊಂಡು ಕೂತ. ಆ ಫುಟ್ಪಾತಿಗೆ ಹಾಕಿದ್ದ ಬ್ರಿಕ್ಗಳು ಏರು ಪೇರಾಗಿದ್ದವು. ತರಕಾರಿ ಮಾರುವ ಆ ಅಜ್ಜಿ ಅವನ್ನು ಸರಿ ಮಾಡಿ ಇಡುತ್ತದ್ದಳು. ಈತನೂ ನೆರವಾಗುತ್ತಿದ್ದ.

ಬ್ರಿಕ್ಗಳ ಅಡಿಗೆ ಹಾದುಹೋದ ಕಾಲುವೆ ಒಳಗಿಂದ ಹಾವೋ,ಇಲಿಯೋ ವಾಸನೆಯೋ ಬರಬಹುದಾಗಿತ್ತೇನೋ ಏನೋ..!? ಅಥವಾ ರಾತ್ರಿ ಅಲ್ಲಿ ನಡೆದಾಡಿವರ ಕಾಲು ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯೂ ಇತ್ತು. ನಡೆದಾಡೋ ಜನರಿಗೂ ಅದು ಅನುಕೂಲವಾಯಿತು. ಇತ್ತ ಇವರಿಗೆ ಪರಸ್ಪರ ಸಹಾಯವೂ ಆಯಿತು. ಏಕೆಂದರೆ ಅವರು ಇಡೀ ದಿನ ಕಳೆಯವುದು ಅಲ್ಲಿಯೇ. 

( ಸಾಂದರ್ಭಿಕ ಚಿತ್ರ)


ಇದೊಂದು ಸಣ್ಣ ದೃಶ್ಯ. ಉಪೇಕ್ಷಿಸಬಹುದಾದ ದೃಶ್ಯ. ನನ್ನ ಮನಸಿಗೆ ಯಾಕೆ ಅಂಟಿತೋ ಗೊತ್ತಿಲ್ಲ. 

ನನಗನ್ನಿಸಿದ್ದಿಷ್ಟೇ, ಆ ಜಾಗ ಅವರದ್ದಲ್ಲ. ಅವರಿರುವ ಜಾಗ. ಅವರೆಷ್ಟು ದಿನ ಸಲ್ಲಿ ವ್ಯಾಪಾರ ನಾಡುತ್ತಾರೊ ಗೊತ್ತಿಲ್ಲ. ಆದರೆ ತಾವಿರುವ ಜಾಗ ಸರಿಯಾಗಿ ಇರಬೇಕೆಂದು ಅಷ್ಟು ಪ್ರಯತ್ನ ಮಾಡಿದರಲ್ಲ. ಅದು ಮುಖ್ಯ. 


ಏಕೆಂದರೆ ಹಾಳಾಗಿ ಹೋಗಲಿ ನಮಗ್ಯಾಕೆ ಎಂದು ಬಹಳಷ್ಟು ಜನರು ಕೈ ಒರೆಸಿಕೊಂಡು ಹೋಗಿಬಿಡುತ್ತಾರೆ.  ದಿನಕ್ಕೆ ಸಾವಿರ ಸಾವಿರ ಗಳಿಸುವ , ಒಳ್ಳೆ ಹುದ್ದೆಯಲಿರುವ ಜನರು ಏನಾದರಾಗಲಿ ನನಗೇನು ಎಂಬಂತೆ ವರ್ತಿಸುತ್ತಾರೆ. ಖಾಸಗಿ ಜೀವದಲ್ಲಿ ಕೆಟ್ಟದಾಗಿ ಬದುಕುತ್ತಾರೆ. ಆದರೆ ದಿನಕ್ಕೆ ನೂರು ರೂಪಾಯಿ ಗಳಿಸುವ ಈ ಜನರು ಕೊಂಚ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಇವುಗಳಿಂದಲೇ ಪ್ರೇರಣೆಗಳು ದೊರೆಯುವುದು. ಹಾಗೂ ಸಣ್ಣ ಕೆಲಸಗಳಿಂದಲೇ ಬದಲಾವಣೆಗಳಾಗುವುದು. ಹಣಗಳಿಸಿದ ಮಾತ್ರಕ್ಕೆ ಒಳ್ಳೆಯ ದಿನಗಳು ಒಳ್ಳೆಯ ಸಮಾಜ ರೂಪಿತವಾಗದು. ಜನರ ನಡತೆಗಳಿಂದ, ಸಣ್ಣ ಸಣ್ಣ ಸಹಾಯಗಳಿಂದ ಬದುಕು ಸಹ್ಯ ಸುಂದರವಾಗುತ್ತದೆ. ಇದು ಅನುಭವ ಮತ್ತು ಸತ್ಯ.


#ಹೊಳಪು

7 views0 comments

Recent Posts

See All

ಈ ವರ್ಷ...

ಏನ್ ಮಳೆ ಬ್ರೋ...ಸಕತ್ ಹೊಡಿತಾ ಐತೆ. ಮಳೆನಾ ಅದು..ನೀರೇ ಸುರದಂಗೈತೆ...ಬೆಂಗಳೂರಿನ ಗೆಳೆಯ ಮಳೆ ವರ್ಣನೆ ಮಾಡ್ತಾಇದ್ದ. ಸಂಜೆ ಎಂಟಕ್ಕೆ ಶುರುವಾದ ಮಳೆ ಹನ್ನೊಂದರವರೆಗೆ...

ಏನೋ ಒಂಥರಾ....

ಒಂಟಿಯಾಗಿ ಕೂತು ಕೂತು ಬೋರಾಗಿತ್ತು ನಿಶಾಂತ್ಗೆ. ಎಷ್ಟು ದಿನಾಚಾಂತ ಹೀಗೆ ಖಾಲಿ ಕೂರೋದು ತಿನ್ನೋದು ಮಲಗೋದು? ಏನಾದರೂ ಮಾಡೋಣ ಅಂದುಕೊಳ್ಳುತ್ತಲೇ ಎರಡೂವರೆ ತಿಂಗಳು...

Comments


Post: Blog2_Post
bottom of page